Thursday, June 9, 2011

ಬದಲಾಗುವುದೆಂದರೆ ಅರ್ಧರಾತ್ರಿಯಲ್ಲಿ ಮನೆ ಬಿಡುವುದಾ?


ಯಾರಿಗೂ ಪುರುಸೊತ್ತಿಲ್ಲ. ಎಲ್ಲರೂ ಎಲ್ಲೆಲ್ಲಿದ್ದಾರೋ ಅಲ್ಲಲ್ಲಿಯೇ ಕಳೆದು ಹೋಗಿದ್ದಾರೆ. ಕಳೆದು ಹೋಗುವ ಅನಿವಾರ್ಯತೆಯನ್ನು ನಮಗೆ ನಾವೇ ಸೃಷ್ಟಿಸಿಕೊಂಡಿದ್ದೇವೆ. ಅಮ್ಮ, ಅಕ್ಕ, ತಂಗಿ, ಹೆಂಡತಿ, ಗೆಳೆಯರು -ಹೀಗೆ ಆತ್ಮೀಯರ ಜತೆ ನಾಲ್ಕು ಮಾತಿಗೆ ಬಿಝಿ ಷೆಡ್ಯೂಲ್‌ನಲ್ಲಿ ಸಮಯ ಹೊಂದಿಸಿಕೊಳ್ಳಲು ತಿಣುಕಾಡಬೇಕಾಗಿದೆ.

ಕೆಲಸಕ್ಕಾಗಿ ಬೆಂಗಳೂರಿಗೆ ಬಂದ ಹಳ್ಳಿ ಹುಡುಗ, ಆರಂಭದಲ್ಲಿ ಊರಿಗೆ ವಾರಕ್ಕೊಮ್ಮೆ ಹೋಗುತ್ತಿದ್ದ. ನಂತರ ಎರಡು ವಾರಕ್ಕೊಮ್ಮೆ, ಆಮೇಲೆ ತಿಂಗಳಿಗೊಮ್ಮೆ. ಅಮೇಲಾಮೇಲೆ ಮೂರು ತಿಂಗಳಿಗೊಮ್ಮೆ. ಕೊನೆಕೊನೆಗೆ ವರ್ಷಕ್ಕೊಂದು ಸಲ. ಮದುವೆಯಾದ ಮೇಲೆ ಊರು ಎಲ್ಲಿದೆ ಎಂಬುದೇ ಆತನಿಗೆ ನೆನಪಾಗುತ್ತಿಲ್ಲ. ಪ್ರತಿ ಶ್ರಾವಣ ಶನಿವಾರ ಮನೆ ದೇವರ ದೇಗುಲಕ್ಕೆ ಹೋಗುವುದನ್ನು ಆತ ತಪ್ಪಿಸುತ್ತಿರಲಿಲ್ಲ. ಆದರೀಗ ಮನೆ ದೇವರು ಸಹ ದೂರ.

ಬೆಂಗಳೂರಿನಂಥ ಮಾಯಾನಗರಿಗಳು ಎಲ್ಲರನ್ನೂ ಕರೆಕರೆದು ಕೆಲಸ ಕೊಡುತ್ತವೆ. ಈ ಮಾಯಾನಗರಿಯ ಸೆಳೆತದಲ್ಲಿ ವ್ಯತ್ಯಾಸಗಳೇ ಕಾಣಿಸುವುದಿಲ್ಲ. ನಮ್ಮತನವೇ ಸವೆದು ಹೋಗಿರುತ್ತದೆ. ಎಲ್ಲರಿಗೂ ಒಂದೇ ಸಮವಸ್ತ್ರ. ಒಂದೇ ಕೆಲಸ. ಭಾವನೆಗಳೇ ಇಲ್ಲದ ಯಾಂತ್ರಿಕ ಬದುಕುಎಂದು ಹೇಳಲು ಹೊರಟರೆ, ಅದೇ ಹಳೆಯ ಕೊರಗು ಎನ್ನುವಿರೇನೋ?

ಗಂಡ ಹೆಂಡತಿ ಜತೆ, ಮಕ್ಕಳು ಹೆತ್ತವರ ಜತೆ ಇಮೇಲ್‌ನಲ್ಲಿ, ಎಸ್‌ಎಂಎಸ್‌ಗಳಲ್ಲಿ ಮಾತಾಡುವ ಕಾಲವಿದು. ಮಗನ ಹುಟ್ಟುಹಬ್ಬವನ್ನು ಮೊಬೈಲ್ ನೆನಪಿಸುತ್ತದೆ. ಕೂಡಲೇ ಕರೆ ಮಾಡಿ, ಮಗನಿಗೆ ಹೂಗುಚ್ಛ ತಲುಪುವಂತೆ ಅಪ್ಪ ವ್ಯವಸ್ಥೆ ಮಾಡುತ್ತಾನೆ. ಹುಟ್ಟಿದ ಹಬ್ಬದ ದಿನವಾದರೂ ನನ್ನ ಜತೆ ಅಪ್ಪ ಕಾಲ ಕಳೆಯುತ್ತಾನೆ ಎಂದು ಭಾವಿಸುವ ಮಗನಿಗೆ, ಆ ದಿನವೂ ಯಾವುದೇ ವ್ಯತ್ಯಾಸ ಗೊತ್ತಾಗುವುದಿಲ್ಲ. ಯಾವುದೋ ಎಮರ್ಜೆನ್ಸಿ ಮೀಟಿಂಗ್, ಮುಗಿಯದ ಪ್ರಾಜೆಕ್ಟ್, ತಲೆತಿನ್ನುವ ಕೆಲಸಗಳು ಭಾವನೆಗಳನ್ನು ತಣ್ಣಗೆ ಕೊಲ್ಲುತ್ತದೆ.

ಮ್ಯಾನೇಜ್‌ಮೆಂಟ್ ಕಾಕದೃಷ್ಟಿ ತಪ್ಪಿಸಿಕೊಳ್ಳಲು ಗಾಣದ ಎತ್ತಿನಂತೆ ದುಡಿಯಲೇ ಬೇಕು. ಮಲ್ಯನ ರೇಸ್ ಕುದುರೆಗಳಂತೆ ದಣಿವನ್ನು ಮರೆತು ಓಡಲೇ ಬೇಕು. ಗುರಿಯಿಲ್ಲದ ಈ ಓಟ, ನಿರಂತರ. ಸ್ವಲ್ಪ ಏರುಪೇರಾದರೂ ಕೆಲಸಕ್ಕೆ ಕತ್ತರಿ. ಈಗಿನದು ಊರಿಗೆ ನೂರಾರು ಪದ್ಮಾವತಿಯರ ಕಾಲ. ನಮ್ಮ ಕುರ್ಚಿ ಅಲಂಕರಿಸಲು ದೊಡ್ಡದೊಂದು ಕ್ಯೂ ಆಗಲೇ ಹನುಮಂತಪ್ಪನ ಬಾಲದಂತೆ ಬೆಳೆದು ನಿಂತಿದೆ.
ಜಗದ ಸಂಕಷ್ಟಗಳನ್ನು ಅವುಗಳ ಪಾಡಿಗೆ ಬಿಟ್ಟು, ಎಲ್ಲವನ್ನೂ ಮರೆತು, ನಮಗೆ ಬೇಕಾದವರೊಂದಿಗೆ ಹೋಟೆಲ್‌ನಲ್ಲಿ ಕೂತು ಕಾಫಿ ಹೀರಿದ್ದು ಯಾವಾಗ? ಯಾವುದೋ ಪಾರ್ಕ್‌ನಲ್ಲಿ, ನಮ್ಮದೇ ಮೆಚ್ಚಿನ ತಾಣಗಳಲ್ಲಿ ಕೂತು ಅವರೊಂದಿಗೆ ನೆನಪುಗಳನ್ನು ಕೆದಕಿದ್ದು ಯಾವಾಗ? ಯಾವುದೋ ಮರೆತ ಹಳೆಯ ಹಾಡನ್ನು ತಪ್ಪು ತಪ್ಪಾಗಿಯೇ ಗುನುಗಿ, ಮಧುರಾನುಭೂತಿ ಹೊಂದಿದ್ದು ಯಾವಾಗ? ನೆನಪುಗಳು ತಿಂಗಳುಗಳನ್ನು ದಾಟಿ ವರ್ಷಗಳನ್ನು ಎಣಿಸುತ್ತವೆ.

ಅವನೆಲ್ಲೋ ಇವನೆಲ್ಲೋ? ಭೇಟಿ ನೆಪದಲ್ಲಿ ದೂರದ ಗೆಳೆಯ ಊರಿಗೆ ಬಂದರೂ ನಮಗೆ ಸಿಗುವುದೇ ಇಲ್ಲ. ಕನಸಲ್ಲಿ ಬಂದಂತೆ ಮಿಂಚಿ ಮಾಯವಾಗುತ್ತಾನೆ. ಊರಿಗೆ ಬಂದರೂ ಸೆಲ್‌ನಲ್ಲಿಯೇ ಆತ ಹೆಚ್ಚಾಗಿ ಸಿಗುತ್ತಾನೆ. ನೇರ ಸಿಕ್ಕರೂ ಸೆಲ್‌ನಲ್ಲಿಯೇ ಇರುತ್ತಾನೆ. ಯಾರಿಗೋ ಎಸ್ಸೆಮ್ಮೆಸ್‌ಗಳನ್ನು ಒಂದರ ನಂತರ ಒಂದರಂತೆ ಕಳುಹಿಸುತ್ತಾ, ನಾವು ಹೇಳಿದ್ದಕ್ಕೆ ತಲೆಯಾಡಿಸುತ್ತಿರುತ್ತಾನೆ! ಅವನು ಪಕ್ಕದಲ್ಲಿದ್ದರೂ, ದೂರದಲ್ಲಿದ್ದಂತೆ ಭಾವ. ಹಾಕಿಕೊಂಡಿದ್ದ ಯೋಜನೆಗಳು ಯಥಾ ಪ್ರಕಾರ ಮುಂದಿನ ಭೇಟಿಗೆ ವರ್ಗವಾಗುತ್ತವೆ. ಕೊನೆಗೆ ಊರು ಬಿಡುವ ವಿಷಯ ಸಹ ತಿಳಿಯುವುದಿಲ್ಲ.
ಒಂದೆರಡು ದಿನಗಳ ನಂತರ ಫೋನಲ್ಲಿಯೇ ಅದೇನಾಯ್ತು ಅಂದ್ರೆ..ಎಂದು ಆತ ನೆಪಗಳನ್ನು ಜೋಡಿಸಲು ಶುರು ಮಾಡುತ್ತಾನೆ. ಅವುಗಳನ್ನು ಒಪ್ಪದೇ ಅಥವಾ ನಂಬದೇ ಬೇರೆ ದಾರಿಯಾದರೂ ನಮಗಿದೆಯೇ?

ಚಿಕ್ಕ ಕನಸುಗಳನ್ನು ಕಾಣುವುದು ಅಪರಾಧ ಎಂದು ಎಲ್ಲೋ ಕೇಳಿದ ಮಾತು ತಲೆಯಲ್ಲಿ ಉಳಿದಿರುತ್ತದೆ. ನನಗೆ ಆಸೆಗಳಿಲ್ಲ. ತಿಂಗಳಿಗೆ ಕೇವಲ ೫೦೦೦ ರೂಪಾಯಿ ಸಿಕ್ಕರೆ ಸಾಕು. ನಾನು ಆನಂದದ ಬದುಕು ಕಟ್ಟಿಕೊಳ್ಳುತ್ತೇನೆಎನ್ನುತ್ತಿದ್ದ ಗೆಳೆಯನ ಸಂಬಳ ಈಗ ೫೦ ಸಾವಿರ. ಆದರೂ ಆತನಿಗೆ ಸಮಾಧಾನ ಇಲ್ಲ. ಸೈಕಲ್ ಸಾಕು ಎನ್ನುತ್ತಿದ್ದವಗೆ ಸ್ಕೂಟರ್ ಸಿಕ್ಕಿದೆ. ರಸ್ತೆಯಲ್ಲಿ ನಿಂತು, ಕಾರಿನ ಕನಸು ಕಂಡವನ ಮನೆಯಲ್ಲಿ ಎರಡೆರಡು ಕಾರುಗಳಿವೆ.ಮಗಳ ಮದುವೆ ಮುಗಿದರೆ ನಾನು ಪುನೀತ. ತಲೆಮೇಲಿನ ಹೊರೆ ಇಳಿಸಿಕೊಂಡು ಹಗುರಾಗುತ್ತೇನೆಎನ್ನುತ್ತಿದ್ದ ಯಜಮಾನರು, ತಮ್ಮ ಮೊಮ್ಮಗಳಿಗೂ ಮದುವೆ ಮಾಡಿದ್ದಾರೆ. ಆದರೂ ಇವರ‍್ಯಾರಲ್ಲೂ ಸಂತೋಷ ಕೆನೆಕಟ್ಟಿಲ್ಲ.

ಆನಂದವನ್ನು ಬಿಟ್ಟು ನಾವು ಸುಖದ ಬೆನ್ನತ್ತಿರುವುದರಿಂದಲೇ ಹೀಗಾಗುತ್ತಿದೆ. ಆನಂದ ನೀಡುವ ಮೇಷ್ಟ್ರು ಕೆಲಸದತ್ತ ಯಾರಿಗೂ ಆಸಕ್ತಿಯಿಲ್ಲ. ಎಲ್ಲರಿಗೂ ಸಾಫ್ಟ್‌ವೇರ್ ಎಂಜಿನಿಯರ್ ಆಗುವ ಹಂಬಲ ಹೆಚ್ಚುತ್ತಿದೆಎನ್ನುವ ಟಿ.ಎನ್.ಸೀತಾರಾಂ ಮಾತು, ಇಲ್ಲಿ ಸುಮ್ಮನೇ ನೆನಪಾಗುತ್ತಿದೆ. ಮನೆ ಹತ್ತಿರದ ೭ ವರ್ಷದ ಪುಟಾಣಿ ಬಾಲಕಿಯನ್ನು ಮೊನ್ನೆ ಮಾತಾಡಿಸಿದೆ. ದೊಡ್ಡವಳಾದ ಮೇಲೆ ಏನಾಗುತ್ತೀಯಾ?’ ಎಂಬ ಪ್ರಶ್ನೆಗೆ, ತಡವರಿಸದೇ ಡಾಕ್ಟರ್ ಆಗ್ತೀನಿ ಅಂಕಲ್ಎಂದಳು. ಯಾಕೆ?’ ಎಂದರೆ, ‘ಚೆನ್ನಾಗಿ ದುಡ್ಡು ಸಂಪಾದಿಸುವುದಕ್ಕೆಅಂದಳು. ದೊಡ್ಡವರ ದುಡ್ಡಿನ ಮೋಹ ಮಕ್ಕಳ ರಕ್ತದಲ್ಲಿಯೂ ಬೆರೆಯುತ್ತಿದೆಯೇ?

ಈ ಮಧ್ಯೆ ಮದುವೆಗೆ ಬಾರದ ಗೆಳೆಯನೊಬ್ಬ ನಾನು ಬಯಸದಿದ್ದರೂ ಫೋನ್‌ನಲ್ಲಿ ವಿವರಣೆ ಕೊಡುತ್ತಿದ್ದ. ಮದುವೆಗೆ ನೀನು ಬರಲಿಲ್ಲ ಎಂದು ನನಗೆ ಬೇಸರವಿಲ್ಲ. ಅಲ್ಲದೇ ನೀನು ಮದುವೆಗೆ ಬಂದೇ ನಮ್ಮಿಬ್ಬರ ಸ್ನೇಹವನ್ನು ಗಟ್ಟಿಗೊಳಿಸಬೇಕಿತ್ತು ಎಂದು ನಾನು ಭಾವಿಸಿಲ್ಲ. ಹೊಟ್ಟೆಪಾಡಿನ ಸರ್ಕಸ್ ಇದ್ದದ್ದೇ. ಕೆಲವು ಸಲವಾದರೂ ಅನಿವಾರ್ಯತೆಯ ಭೂತದಿಂದ ನಾವು ತಪ್ಪಿಸಿಕೊಳ್ಳಬೇಕು. ನೋಟಿನ ಮಸಿ ಕೈಗೆ ಅಂಟಿದರೆ ಪರವಾಗಿಲ್ಲ. ಮುಖಕ್ಕೆ ಅಂಟಬಾರದು. ನನ್ನ ಮದುವೆ ವಿಷಯ ಬಿಡು, ಅದೇನು ಲೋಕ ಕಲ್ಯಾಣದ ಕಾರ್ಯಕ್ರಮವಲ್ಲ ಎಂದು ಹೇಳಿ ಪೋನ್ ಕೆಳಗಿಟ್ಟೆ.

Courtesy:ಬಾಳಿಗೊಂದು ನಂಬಿಕೆ

Wednesday, November 10, 2010

Wednesday, March 25, 2009

ನಮ್ಮ ಸಂಕಟಗಳಿಗೆ ಮಾರ್ಕೆಟ್‌ ಇಲ್ಲ .. ಪ್ರಚಾರ ನಿಲ್ಲಿಸಿ!

ಸಂತೋಷ ಮತ್ತು ಸಂಕಟ.. ಇವರೆಡೂ ನಮ್ಮ ಬದುಕಲ್ಲಿ ಜೊತೆ ಜೊತೆಗೇ ಇರುತ್ತವೆ. ಒಂದೇ ನಾಣ್ಯದ ಎರಡು ಮುಖಗಳ ಹಾಗೆ! ಕೆಲವೊಮ್ಮೆ ಸಂಭ್ರಮದ ಗಳಿಗೆಗಳು ದಿನಕ್ಕೊಂದರಂತೆ ಜತೆಯಾಗುತ್ತಲೇ ಹೋಗುತ್ತವೆ, ಗೆಳತಿಯ ಪತ್ರಗಳ ಹಾಗೆ.
ಖುಷಿಯ ಕ್ಷಣಗಳು ಒಂದರ ಹಿಂದೊಂದರಂತೆ ನಮ್ಮ ಕೈ ಹಿಡಿದಾಗ ಹಿರಿಹಿರಿ ಹಿಗ್ಗುವ ನಾವು, ಸ್ವಲ್ಪ ದುಃಖ ಅಥವಾ ಸಂಕಟವಾದರೂ ಮುದುಡಿ ಹೋಗುತ್ತೇವೆ. ಆ ಕ್ಷಣಕ್ಕೆ ಅದನ್ನು ಯಾರಲ್ಲಾದರೂ ಹಂಚಿಕೊಂಡರೆ ಮನಸ್ಸು ಕೊಂಚ ಹಗುರಾಗುತ್ತದೆ.

ಕೇಳುವವರು ಆತ್ಮೀಯರಾಗಿದ್ದರೆ, ನಮ್ಮನ್ನು ಅರ್ಥ ಮಾಡಿಕೊಳ್ಳಬಲ್ಲವರಾದರೆ ಅದಕ್ಕೆ ಸರಿಯಾದ ಸಮಜಾಯಿಷಿ ನೀಡಿ ದಾರಿ ತೋರುತ್ತಾರೆ. ಬದಲಿಗೆ ಅದನ್ನು ಹತ್ತಾರು ಮಂದಿಯಾಂದಿಗೆ ಹಂಚಿಕೊಂಡರೆ ಕಷ್ಟ. ನಮ್ಮ ಸಂಕಟದ ಕತೆ ಕೇಳಿ ಎದುರಿನಲ್ಲಿ ‘ಪಾಪ ಕಣ್ರೀ, ಛೆ,ಛೆ, ನಿಮಗೆ ಹೀಗೆ ಆಗಬಾರದಿತ್ತು.. ’ ಎಂದು ರಾಗ ಎಳೆಯುವ ಮಂದಿಯೇ ಹಿಂದಿನಿಂದ ನಮ್ಮನ್ನು ಆಡಿಕೊಳ್ಳುವುದುಂಟು.

ತುಂಬ ಸಂದರ್ಭದಲ್ಲಿ ಸಂಕಟದ ಸಂಗತಿ ನಮ್ಮ ವೈಯಕ್ತಿಕ ಬದುಕಿಗೆ ಸಂಬಂಧಿಸಿರುತ್ತದೆ. ಅದನ್ನು ಹತ್ತು ಮಂದಿಯ ಮುಂದೆ ಹೇಳಿಕೊಂಡರೆ, ಅದಕ್ಕಿಂತ ನಾಚಿಕೆಗೇಡಿನ ವಿಷಯ ಮತ್ತೊಂದಿರೋದಿಲ್ಲ. ಹಾಗಿದ್ದೂ ನಾವು ಒಂದಿಬ್ಬರೊಂದಿಗೆ ಎಲ್ಲವನ್ನೂ ಹೇಳಿಕೊಂಡಿರುತ್ತೇವೆ. ಮಾತಿಗೆ ಮೊದಲೇ -‘ಇದು ಗುಟ್ಟಿನ ವಿಚಾರ. ನಿಮ್ಮಲ್ಲೇ ಇರಲಿ’ ಎಂದು ಷರತ್ತು ಹಾಕಿಯೇ ವಿಷಯ ಆರಂಭಿಸಿರುತ್ತೇವೆ. ಭಾಷೆ ಪಡೆದಿರುತ್ತೇವೆ.

ಎದುರಿಗಿದ್ದಾತ ಕೂಡ ಧಾರಾಳವಾಗಿ ಪ್ರಾಮಿಸ್‌ ಮಾಡಿರುತ್ತಾನೆ. ‘ಛೆ, ಛೆ ಎಲ್ಲಾದ್ರೂ ಉಂಟಾ? ಇಂಥ ವಿಷಯ ನನ್ನೊಳಗೆ ಸಾವಿರ ಇವೆ. ಯಾರಿಗಾದ್ರೂ ಹೇಳಿದೀನಾ?’ ಎಂದು ಪ್ರಶ್ನೆ ಕೇಳಿರುತ್ತಾನೆ. ಹಿಂದೆಯೇ ಇನ್ಯಾರದೋ ಬದುಕಿನ ಒಂದು ಸೂಕ್ಷ್ಮ ವಿಚಾರವನ್ನು ನಮ್ಮ ಕಿವಿಗೆ ಹಾಕಿಯೂ ಬಿಡುತ್ತಾನೆ.

ಯಾಕೆ ಹಾಗಾಗುತ್ತದೋ ಕಾಣೆ. ನಮ್ಮ ಸಂಕಟದ ಮಧ್ಯೆಯೂ, ಬೇರೊಬ್ಬರ ಬದುಕಿನ ಗುಟ್ಟು ತಿಳಿದಾಗ ವಿಚಿತ್ರ ಖುಷಿಯಾಗುತ್ತದೆ. ನಾವು ಹಗುರಾದ ಮನದೊಂದಿಗೆ ಮನೆಯತ್ತ ನಡೆದು ಬಂದರೆ -ಆ ಕಡೆ, ನಮಗೆ ಭಾಷೆ ಕೊಟ್ಟಿದ್ದ ಗೆಳೆಯನಿಂದಲೇ ನಮ್ಮ ಗುಟ್ಟಿನ ವಿಚಾರ ಇನ್ನಾರದೋ ಕಿವಿಗೆ ಬಿದ್ದಿರುತ್ತದೆ!

ನಮ್ಮ ಸುತ್ತಮುತ್ತ ಇರುವ ಎಷ್ಟೋ ಮಂದಿ ಹೇಳುತ್ತಲೇ ಇರುತ್ತಾರೆ. ‘ಅವರ ಮನೆಯ ಸೀಕ್ರೆಟ್‌ಗಳೆಲ್ಲಾ ನನಗೆ ಗೊತ್ತು. ಹಾಗೆಯೇ ನಮ್ಮ ಮನೆಯ ಗುಟ್ಟಿನ ವಿಚಾರಗಳು ಅವರಿಗೂ ಗೊತ್ತು.’ ನೆನಪಿರಲಿ, ಹೀಗೆ ಹೇಳುತ್ತಲೇ ಇನ್ನೊಬ್ಬರ ಮನೆಯ ಗುಟ್ಟಿನ ಸಂಗತಿ ತಿಳಿದುಕೊಂಡ ಜನ ಅದನ್ನು ದೇವರಾಣೆಗೂ ಎರಡನೇ ವ್ಯಕ್ತಿಗೆ ದಾಟಿಸಿಯೇ ತೀರುತ್ತಾರೆ. ನಂತರ ಈ ಎರಡನೇ ವ್ಯಕ್ತಿಯಿಂದ ಅದು ಇನ್ನೂ ಐದಾರು ಮಂದಿಯನ್ನು ತಲುಪುತ್ತದೆ. ನಾಲ್ಕು ದಿನ ಕಳೆಯುವುದರೊಳಗೆ ನಿಮ್ಮ ಮನೆಯ ಗುಟ್ಟಿನ ವಿಚಾರ. ನಾನೂರು ಮಂದಿಗೆ ಗೊತ್ತಾಗಿ ಹೋಗಿರುತ್ತದೆ! ಎಲ್ಲರ ದೃಷ್ಟಿಯಲ್ಲೂ ನೀವು ಅಯ್ಯೋ ಪಾಪ.. !

ಈ ಮಾತಿಗೆ ಒಂದು ಪುಟ್ಟ ಉದಾಹರಣೆ ಕೇಳಿ : ಮನೇಲಿ ಹೆಂಡತಿಯಾಂದಿಗೆ ಚಿಕ್ಕ ಜಗಳ ಆಗಿರುತ್ತೆ. ಆಕೆ ಒಡವೆಗೋ, ರೇಷ್ಮೆ ಸೀರೆಗೋ, ಒಂದಿಷ್ಟು ಹಣಕ್ಕೋ ಡಿಮ್ಯಾಂಡ್‌ ಮಾಡಿರುತ್ತಾಳೆ. ಒಂದೆರಡು ದಿನ ಮಾತು ಬಿಟ್ಟಿರುತ್ತಾಳೆ. ಇದನ್ನೇ ಮಧ್ಯಾಹ್ನ ಊಟದ ವೇಳೆಯಲ್ಲಿ ಅಥವಾ ಸಂಜೆ ಗುಂಡು ಹಾಕಲು ಕೂತ ಮಧುರ(?)ಸಂದರ್ಭದಲ್ಲಿ ನೀವು ಪ್ರಾಂಜಲ ಮನದಿಂದ ಗೆಳೆಯನೊಂದಿಗೆ ಹೇಳಿಕೊಳ್ಳುತ್ತೀರಿ.

ಆತ ಆ ಕ್ಷಣಕ್ಕೆ, ತನಗೆ ತೋಚಿದ ಪರಿಹಾರ ಹೇಳುತ್ತಾನೆ ನಿಜ. ಆದರೆ, ನಿಮ್ಮನ್ನು ಬೀಳ್ಗೊಟ್ಟು ನಾಲ್ಕು ಹೆಜ್ಜೆ ನಡೆದವನು ನೀವು ಹೇಳಿದ ಸಂಗತಿಗೇ ಒಂದಿಷ್ಟು ಉಪ್ಪು, ಖಾರ ಸೇರಿಸಿ ಮತ್ತೊಬ್ಬರ ಕಿವಿಗೆ ಹಾಕಿಬಿಟ್ಟಿರುತ್ತಾನೆ. ‘ಹೆಂಡತಿಯಾಂದಿಗೆ ಜಗಳವಾಡಿದ್ದರಿಂದ ನನಗೆ ಬಹಳ ಬೇಸರವಾಯಿತು’ ಎಂದು ಮಾತ್ರ ನೀವು ಹೇಳಿರುತ್ತೀರಿ ನಿಜ. ಆದರೆ ಅದು ಕಿವಿಯಿಂದ ಕಿವಿಗೆ ತಲುಪುವ ಹೊತ್ತಿಗೆ ‘ಅವನ ಹೆಂಡತಿ ತುಂಬಾ ಘಾಟಿಯಂತೆ. ಬಜಾರಿಯಂತೆ, ಸಖತ್‌ ಹಟಮಾರಿಯಂತೆ. ಮನೇಲಿ ಆಕೆ ಹೇಳಿದ್ದೇ ನಡೆಯಬೇಕಂತೆ. ಇಲ್ಲಾಂದ್ರೆ ಊಟಾನೇ ಹಾಕಲ್ವಂತೆ.. ’ ಎಂದೆಲ್ಲ ಬದಲಾಗಿರುತ್ತದೆ! ಮತ್ತೆ ಆ ಕ್ಷಣದಿಂದಲೇ ನಿಮ್ಮ ಕುರಿತು ‘ಅಯ್ಯೋ ಪಾಪ’ ಎಂಬ ಭಾವ ಸೃಷ್ಟಿಯಾಗಿರುತ್ತದೆ.

ಒಂದೇ ಮಾತಲ್ಲಿ ಹೇಳಿಬಿಡುವುದಾದರೆ -ನಿಮ್ಮ ಸಂಕಟ ಉಳಿದವರ ಪಾಲಿಗೆ ಒಂದು ಗೇಲಿಯ, ತಮಾಷೆಯ, ಅಯ್ಯೋ ಪಾಪದ ವಿಚಾರವಾಗಿ ಬದಲಾಗಿರುತ್ತದೆ.

ವಿಪರ್ಯಾಸವೆಂದರೆ, ಇದೆಲ್ಲ ಕೆಟ್ಟ ಅನುಭವ ಆದ ಬಳಿಕವೂ, ನಾವೆಲ್ಲ ಒಂದಲ್ಲ ಒಂದು ಸಂದರ್ಭದಲ್ಲಿ ಇನ್ನೊಂದು ತಪ್ಪು ಮಾಡಿರುತ್ತೇವೆ. ಏನೆಂದರೆ, ನಾವು ಕೆಲಸ ಮಾಡುವ ಕಚೇರಿಯ/ ಸಂಸ್ಥೆಯ ಮುಖ್ಯಸ್ಥರ ಎದುರು ನಿಂತು ನಮ್ಮ ಸಂಕಟವನ್ನೆಲ್ಲ ಹೇಳಿಕೊಂಡಿರುತ್ತೇವೆ.

ನಮ್ಮ ಕಷ್ಟಗಳನ್ನೆಲ್ಲ ಕೇಳಿದ ನಂತರ -ಆತ ಕರಗಿ ಹೋಗುತ್ತಾನೆ. ಸಮಾಧಾನದ ಮಾತಾಡುತ್ತಾನೆ. ಕಂಬನಿ ಒರೆಸುತ್ತಾನೆ. ಪ್ರೊಮೋಷನ್‌ ಕೊಡುತ್ತಾನೆ, ಸಂಬಳ ಹೆಚ್ಚಿಸುತ್ತಾನೆ. ಇದೇನೂ ಆಗದಿದ್ದರೆ ನಮ್ಮ ಕುರಿತು ಒಂದು ಅನುಕಂಪದ ಭಾವವನ್ನಂತೂ ಖಂಡಿತ ಹೊಂದಿರುತ್ತಾನೆ ಎಂಬ ದೂರಾಲೋಚನೆ ನಮ್ಮದು. ಆದರೆ, ಹಾಗೇನೂ ಆಗುವುದಿಲ್ಲ.

ಎದುರಿಗಿದ್ದಾಗ ಒಂದೂ ಮಾತಾಡದೆ ಎಲ್ಲವನ್ನೂ ಕೇಳಿಸಿಕೊಂಡ ಅಧಿಕಾರಿ, ಒಂದೆರಡು ದಿನಗಳ ನಂತರ ಇನ್ನೊಬ್ಬರೊಂದಿಗೆ ಮತಾಡುತ್ತ ನಮ್ಮ ವಿಷಯ ಬಂದಾಕ್ಷಣ ಎಂಥಾ ವ್ಯಕ್ತೀರೀ ಅವನು? ಸಂಕಟ ಬಂತು ಅಂತ ಹೆಣ್ಣಿಗನ ಥರಾ-ಅಳ್ತಾನಲ್ರೀ, ಅಂದಿರುತ್ತಾನೆ! (ಕಷ್ಟ ಕೇಳಿಕೊಂಡಾಕೆ ಹೆಂಗಸಾಗಿದ್ದರೆ -ಇವರದು ಸದಾ ಇದ್ದದ್ದೇ. ಚಿಕ್ಕದನ್ನೇ ಗುಡ್ಡ ಮಾಡಿರುತ್ತಾರೆ. ಬಿಟ್ಹಾಕಿ ಅತ್ಲಾಗೆ ಎಂದು ತೇಲಿಸಿ ಮಾತಾಡಿರುತ್ತಾನೆ) ಮತ್ತು ಆ ಕ್ಷಣದಿಂದಲೇ ನಮ್ಮ ಕುರಿತು ಒಂದು ಅನಾದರವನ್ನು ಬೆಳೆಸಿಕೊಂಡು ಬಿಡುತ್ತಾನೆ.

ನೆನಪಿಡಿ : ಎಲ್ಲ ನೋವಿಗೂ ಕೊನೆ ಎಂಬುದು ಇದ್ದೇ ಇದೆ. ಹೀಗೆ ಬಂದ ಸಂಕಟ ಹಾಗೆ ಹೋಗಿ ಬಿಡುತ್ತದೆ. ಎಷ್ಟೋ ಬಾರಿ ಅದು ಹೇಳಿ ಕೇಳಿ ಬರುವುದಿಲ್ಲ. ಹೋಗುವಾಗ ಕೂಡ ಅಷ್ಟೇ! ನಮಗಿದು ಅರ್ಥವಾಗಬೇಕು ನಮ್ಮ ಸಂಕಟಗಳಿಗೆ ಯಾವತ್ತೂ ಮಾರ್ಕೆಟ್‌ ಎಂಬುದು ಇರುವುದಿಲ್ಲ. ಹಾಗಾಗಿ ಅದನ್ನು ಪ್ರಚಾರ ಮಾಡಲು ಹೋಗಲೇ ಬಾರದು. ಬೇರೆಯವರ ಅನುಕಂಪದಿಂದ, ಅವರು ಸೂಚಿಸುವ ಪರಿಹಾರದಿಂದ ಬಹಳಷ್ಟು ಸಲ ಸಂಕಟಗಳು ಪರಿಹಾರವಾಗುವುದೇ ಇಲ್ಲ.

ಹಾಗಿರುವಾಗ ಒಬ್ಬರ ಮುಂದೆ ಕಣ್ಣೀರು ಸುರಿಸುತ್ತಾ ಕೂತು ಅವರ ದೃಷ್ಟಿಯಲ್ಲಿ ಕುಬ್ಜರಾಗುವ; ನಗೆಪಾಟಲಿಗೆ ಈಡಾಗುವ ಸರದಿ ನಮ್ಮದಾಗಲೇಬಾರದು.

ಏನಂತೀರಿ?

Courtesy:http://thatskannada.oneindia.in

Monday, March 16, 2009

Going to MANTRALAYA.....

Hi all
I am just sharing my experience of going to MANTRALAYA with you all so that it may be helpful for you in future!.Please forgive me if you find any spelling mistakes .
Since it was around ten years I went to Mantralaya,I thought of going to the temple and get the blessings and also it was half a year I started my carrier.I called my M.tech friends before one month,some of them yes and some said no and finally as USUAL only ME and DARSHAN were ready to go.Since the work was too much for Darshan in his company he said YES on the friday(13th MARCH 2009) evening.
Earlier we had planned to go for the KSTDC package for this Mantralaya which starts on Friday night and Saturday to Mantralaya and Sunday to Hampi and back to Bangalore on Monday morning.Cost was ok(1455 per person).Since time was the constraint we didn't book for that.
So the plan was leave Bangalore by Friday night and reach Mantralaya by Saturday morning ,see the temple and leave to Bangalore by Saturday night and we executed our plan rightly.

CLICK ON THE IMAGES TO ENLARGE.

I reached Majestic by 8 and was waiting for Darshan.When I enquired about the platform for Mantralaya,the guy said 28 .I was searching where it was and he said we have go near the entrance of Majestic after the Mysore bus platform.Whne I went there were plenty of Rajahamsa buses ready fro Mantralaya.When I saw the online booking,it said it was full,but here there were more buses inlcudiong the KSRTC and APSRTC .There was Rajahamsa buses at 8,8.15,8.30,9, and 9.30 and only one AIRAVATH at 9(cost Rs 500 for each).The Rajahamsa costs Rs 275.There were many Karnataka saruge buses also.Since it was 9-10 hours journey we thought of going by Rajahamsa itself.When Darshan came crossing the Bangalore traffic it was 8.20.The 8.30 bus had two seats so as soon as he came we got into that bus.The conductor demands some more amount for these seats.But as there were many buses we gave Rs 275 itself and he also agreed.The driver of that bus asked us not to give more money top conductor!!!.So it was 8.30 we left the Bangalore bus stand.

There are two routes for Mantralaya,one is bellary route and other is Ananthpur route.Usually all buses take Ananthpur route thorugh chikballapur as Bellary route is more long.We went through Ananthpur route.

Route info from Team-BHP from net

Route : Bangalore.. Yelahanka ( Byepass ).. Chickballapur.. Penukonda.. Anantpur ( Byepass ).. Gooty.. Pattikonka ( Byepass ).. Aspari ) ...Adoni... Madhavaram.. .. Mantralayam ( Manchala ).
Distance : 407 kms

The entire stretch of NH 7 from Chickballapur to Anantpur is being widened. Top speed could not cross 80-90 kms/ hr - many speed breakers, culvert constructions / diversions.Beware of culvert diversions especially if dark. Rough patches near Penukonda ( near ghats ).

Good roads ( if not excellent ) from Gooty to Mantralayam..except for small stretch near pattikonda bye pass.
There are lot of buses, sharing- autos and lorries which ply on these roads.

Road condition between Gooty and Adoni

Bangalore - Gooty road condition
Ok let me continue our journey we had got the seat number 35 and 36 almost the last.The bus stopped at chikballapur for dinner at 10. and it was very bad hotel.We made dinner some how with difficulty.
Inside the hotel



Then I got a sms from Airtel saying you are in Andhra pradesh at 11.40 pm.The roads were good until Gooty where driver stopped a bit for rest.Since we were in the back seat we experienced the bad road conditions very neatly.Finally we reached Mantralaya exactly at 5.30 in the morning(9 hours of Journey)
Here as the bus stopped there were many hotel people surroundign the bus saying about the rooms.We first went and enquired in the temple rooms .We were disappointed by hearing that no rooms were there.Then we went to the nearby hotel and made the room for Rs 250 for the day.Since there was a TV in the room we thught of seeign the cricket mathc(5th ODI-IND vs NZ) a bit ,but rain had stopped play.we took rest for an hour.


We took the hot water bath and got ready for going to temple.Before going to temple we went to bus stand and made the reservation for the return journey.

On the way to Bus stand


On the way from bus stand to temple
The Mantralaya is very small town with few hotels and houses around and a small bus stand near to temple(walkable).We made the Rajahamsa reservation leaving at 8.10 in the night to Bangalore.

First we went to the Manchalamma temple which is beside the main temple

We went to the main temple and had the direct Dharma darshan(Timings:6 am to 8 am .10 am to 2 pm.Evening 4 to 7.30 pm and 9.30 to 10).People were less in number.We saw the god Sri Raghavendra Swamy Brindavan and came out.Since we were new we didn't knew about the different seva ticket infromation .We got the ticket for Panchamrutha seva and went again inside the temple.


When we went inside the temple again ,the abhisekham was about to start and we were lucky to see that in front of our us.After seeing God for few minutes we came out and had prasdadam for the ticket we took.Finally we came outside at 10.10 am.


Then we went to the Lord Venkateshwara temple which is very nearby .Here are some snapshots of that


Since it was around 11,we went to room and took rest.We got up at 1.30 in the afternoon and went to temple for lunch(prasadam).The dining hall is present outside the temple premises.


Then we decided to go to Panchamukhi Anjaneya temple.We waited for the bus ,but no bus was available.Then decided to go by shared auto(Going and coming to Mantralaya is Rs 30 for each) 10 members are out into that big auto.The temple is in Raichur ,Karnataka 20 kms from Mantralaya,so we crossed the two states in auto!!!!!.The road is very very bad.We reached the temple at 4,stayed there till 4.30 and came back to Mantralaya at 5.30
INSIDE KARNATAKA

The auto we went at Panchamukhi temple




Return to Mantralaya

We came to Mantralaya around 5.30 .We went to room and watched TV for an hour and got ready for our return journey to Bangalore.We were there in Bus stand at 7.40.The bus came exactly at 8.10 from Raichur.The was very new and had a very good interior for keeping the luggages and the seats were very good,but no TV!!!.The bus stopped for dinner near Emiganur for 15 mins and from then the journey was good as we went to sleep and got up early in the morning at 5 in Bangalore.It was overall a very good experience for both of us.

Friday, February 27, 2009

ಈಗಷ್ಟೇ ನೀವೊಂದು ಕೆಲಸ ಮಾಡಿ ಮುಗಿಸಿದ್ದೀರಾದರೆ :ನಿಮಗೊಂದು ಪ್ರಶ್ನೆ!------ರವಿ ಬೆಳಗೆರೆ

ಯಾವ ಗೆಲುವೇ ಆದರೂ, ಅದು ತಾತ್ಕಾಲಿಕ. ಇವತ್ತಿನ ಸಂಭ್ರಮ ಇನ್ನು ಕೆಲವೇ ದಿನಗಳಿಗೆ ಇರುವುದಿಲ್ಲ.ಮುಂದೇನು?ಅಂತ ಯೋಚಿಸದಿದ್ದರೆ ನೀವು ಒಂದೇ ಒಂದು ಗೆಲುವಿಗೆ ಸೀಮಿತರಾಗುತ್ತೀರಿ. ಅಲ್ಪ ತೃಪ್ತರಾಗಬೇಕಾಗುತ್ತದೆ. ಸಾಧನೆ ಮೊಟಕಾಗುತ್ತದೆ!


ಮೊನ್ನೆ ಹಂಸಲೇಖಾ ಬಂಗಾರದಂಥ ಮಾತು ಹೇಳಿದರು. ಅವರು ಮೊಟ್ಟ ಮೊದಲಬಾರಿಗೆ ಸ್ವತಂತ್ರವಾಗಿ ಸಂಗೀತ ನಿರ್ದೇಶನ ಮಾಡುತ್ತಿದ್ದರಂತೆ. ಮದರಾಸಿನ ಸ್ಟುಡಿಯೋದಲ್ಲಿ ರೆಕಾರ್ಡಿಂಗು. ಒಂದುನೂರ ಐವತ್ತು ಜನ ವಾದ್ಯಗಾರರನ್ನಿಟ್ಟುಕೊಂಡು ದೊಡ್ಡ ಸಾಹಸ ಮಾಡುತ್ತಿದ್ದ ಘಳಿಗೆ. ರೆಕಾರ್ಡಿಂಗ್ ನಡೆಸುತ್ತಿದ್ದಷ್ಟು ಹೊತ್ತೂ ಒಬ್ಬ ಸೌಂಡ್ ಇಂಜಿನೀಯರ್ ಅಲ್ಲೇ ನಿಂತು ಎಲ್ಲವನ್ನೂ ನೋಡಿ, ಕೇಳಿಸಿಕೊಂಡು ಹ್ಯಾಗಾಯ್ತು?ಎಂಬಂತೆ ತನ್ನತ್ತ ನೋಡಿದ ಹಂಸಲೇಖಾ ಅವರಿಗೆ, ನೀವು ಸಿಗರೇಟು ಸೇದುತ್ತೀರಾ?ಅಂತ ಕೇಳಿದರಂತೆ.

ಸೇದ್ತೇನೆಅಂದಿದ್ದಕ್ಕೆ ಹಾಗಾದರೆ ಹೊರಗಡೆ ಹೋಗಿ ಒಂದು ಸಿಗರೇಟು ಸೇದಿ ನಿರಾಳಗೊಂಡು ವಾಪಸು ಬನ್ನಿಅಂದರಂತೆ. ಸಿಗರೇಟೆಳೆದು ನಿಜಕ್ಕೂ ನಿರಾಳಗೊಂಡು ಹಿಂತಿರುಗಿದ ಹಂಸ್ ಗೆ ಆತ ಹೇಳಿದ್ದು, Now, think what next!

ಮೊನ್ನೆ ಮೀರಾ ಮಾಧವ ರಾಘವಸಿನಿಮಾದ ಆಡಿಯೋ ಸಿ.ಡಿ. ಬಿಡುಗಡೆ ಮಾಡುತ್ತಾ ಮಿತ್ರರಾದ ಟಿ.ಎನ್.ಸೀತಾರಾಂ ಅವರಿಗೆ ಹಂಸಲೇಖಾ ಹೇಳಿದ್ದೂ ಅದನ್ನೇ. ಮುಂದೇನು? ಯೋಚನೆ ಮಾಡಿ.

ನಾವು ಆ ಕೆಲಸ ಮಾಡುವುದೇ ಇಲ್ಲ. ಹಳೆಯ ಸಂಭ್ರಮಗಳಲ್ಲೇ ತುಂಬ ದಿನ ಮುಂದುವರೆಯುತ್ತೇವೆ. ಒಂದು ಗೆಲುವು, ಒಂದು ಸಾಧನೆ ನಮ್ಮನ್ನು ತುಂಬ ದಿನ ಖುಷಿಯಿಂದ ಇಟ್ಟುಬಿಡುತ್ತದೆ. ಮುಂದೇನು ಮಾಡಬೇಕು ಅಂತ ಯೋಚಿಸಲಿಕ್ಕೂ ಬಿಡದಂಥ ಗೆಲುವಿನ ಅಮಲು ಅದು. ಗೆಲುವಿನ ಅಮಲು ತಂದಿಡುವ ವಿಕಾರಗಳ ಪೈಕಿ ಈ ಮೈಮರೆವೂ ಒಂದು.

ಗೆಲುವು ನಮ್ಮಲ್ಲೊಂದು ಕ್ರೌರ್ಯವನ್ನು ಸ್ಥಾಪಿಸಬಲ್ಲದು. ಕೊಂಚ ಉಡಾಫೆ ಮೈಗೂಡಿಸಿಕೊಳ್ಳಬಹುದು. ಇದ್ದಕ್ಕಿದ್ದಂತೆ ಉಳಿದವರಿಗೆ ಅಡ್ವೈಸು ಮಾಡುವ ಪ್ರವಾದಿ ಗೆಟಪ್ಪು ಬಂದು ಬಿಡಬಹುದು. ಅತಿಯಾದಕಾನ್ಫಿಡೆನ್ಸ್ ಮೈಗೂಡಬಹುದು. ಉಳಿದವರನ್ನೆಲ್ಲ ಕಸ ಎಂಬಂತೆ ಕಾಣುವ ಹಾಗೆ ಮಾಡಬಹುದು. ಇವೆಲ್ಲವನ್ನೂ ಮೈಗೂಡಿಸಿಕೊಂಡರೆ ಆಗಬಹುದಾದ ಅಪಾಯವಿದೆಯಲ್ಲ? ಅದಕ್ಕಿಂತ ದೊಡ್ಡ ಅಪಾಯವೆಂದರೆ, ಗೆಲುವಿನ ಮೈಮರೆವು.

ಯಾವ ಗೆಲುವೇ ಆದರೂ, ಅದು ತಾತ್ಕಾಲಿಕ. ಇವತ್ತಿನ ಸಂಭ್ರಮ ಇನ್ನು ಕೆಲವೇ ದಿನಗಳಿಗೆ ಇರುವುದಿಲ್ಲ. ಕಟ್ಟಿಸಿದ ಮನೆಯನ್ನು ಎಷ್ಟು ದಿನಾ ಅಂತ ಗೆಳೆಯರಿಗೆ ಕರೆಕರೆದು ತೋರಿಸುತ್ತೀರಿ? ರ್ಯಾಂಕ್ ಬಂದದ್ದಕ್ಕೆ ಇನ್ನಷ್ಟು ದಿನ ಬೀಗುತ್ತೀರಿ? ಯಾವ ಸಂತೋಷವೂ ಶಾಶ್ವತವಲ್ಲ. ಕ್ರಮೇಣ ಎಲ್ಲವೂ ರೊಟೀನಿಗೆ ಬೀಳುತ್ತದೆ.

ಮುಂದೇನು?ಅಂತ ಯೋಚಿಸದಿದ್ದರೆ ನೀವು ಒಂದೇ ಒಂದು ಗೆಲುವಿಗೆ ಸೀಮಿತರಾಗುತ್ತೀರಿ. ಅಲ್ಪ ತೃಪ್ತರಾಗಬೇಕಾಗುತ್ತದೆ. ಅಥವಾ ಇಷ್ಟು ಸಾಕಪ್ಪಎಂಬ ಅನುಕೂಲ ಸಿಂಧು ವೇದಾಂತ.

ಒಂದಾದ ಮೇಲೊಂದರಂತೆ ಕದನ ಗೆದ್ದು ಗೆಲುವಿನ ಗುಡ್ಡೆ ಹಾಕಿಕೊಳ್ಳಲು ಬಯಸುವ ಮನುಷ್ಯ What next?ಅಂತ ಯೋಚಿಸುತ್ತಲೇ ಇರುತ್ತಾನೆ. ಅದು ಮಾತ್ರ ನಮ್ಮನ್ನು ಚಲನಶೀಲವಾಗಿಡಬಲ್ಲದು.

ಅನೇಕ ಕಾದಂಬರಿಕಾರರು ತಮ್ಮ ಕೃತಿ ಪ್ರಿಂಟಾಗಿ ಬರುವುದಕ್ಕೆ ಮುಂಚೆಯೇ ಮತ್ತೊಂದು ಕೃತಿಯ ಚೌಕಟ್ಟು ಕಟ್ಟಿಕೊಳ್ಳತೊಡಗಿರುತ್ತಾರೆ. ಸಿನಿಮಾ ನಿರ್ದೇಶಕರು, ಪತ್ರಕರ್ತರು ಕೂಡ. ಪತ್ರಿಕೋದ್ಯಮದಲ್ಲಂತೂ ಎಲ್ಲವೂ ಕ್ಷಣಿಕ. ಇವತ್ತು ಮಹಾನ್ ಸ್ಫೋಟಕ ವರದಿ ಬರೆದವನನ್ನು ನಾಳೆಗಾಗಲೇ ಓದುಗರು ಮರೆತಿರುತ್ತಾರೆ. ವರದಿಯೊಂದಿಗೆ ಅವನ ಬೈಲೈನ್ (ಹೆಸರು)ಬಂತಾ? ಅವತ್ತಷ್ಟೇ ಅವನು ಜೀವಂತ. ಯು ಆರ್ ರಿಮೆಂಬರ್ಡ್ ಬೈ ಯುವರ್ ಲಾಸ್ಟ್ ಬೈ ಲೈನ್ಎಂಬಂದು ಪತ್ರಿಕೋದ್ಯಮದ ಅತಿ ದೊಡ್ಡ ಎಚ್ಚರಿಕೆ.

ಹಾಗಂತ, ಕೇವಲ ಮುಂದೇನು ಅಂತ ಮಾತ್ರ ಯೋಚಿಸಿದರೆ ಸಾಲದು.

ಒಂದು ಕೋರ್ಸಿಗೆ ಸೇರಿಕೊಳ್ಳುವ ಹುಡುಗ ಹತ್ತು ವರ್ಷಗಳ ನಂತರವೂ ಈ ಕೋರ್ಸ್ ನನಗೆ ಉಪಯೋಗಕ್ಕೆ ಬರುಬಲ್ಲುದಾ ಅಂತ ಯೋಚಿಸಬೇಕು. ಇವತ್ತಿನದಷ್ಟೆ ಯೋಚಿಸಿದರೆ, ಅದು ಬೀದಿ ಬದಿಯಲ್ಲಿ ಬಟ್ಟೆಯ ಡೇರೆ ಹಾಕಿ ಹರಿಯಾಣ ಹ್ಯಾಂಡ್ ಲೂಮ್ ಮಾರಾಟ ಮಳಿಗೆ ತೆರೆದಂತೆ. ಎರಡು ವಾರದ ನಂತರ ಅದು ಟೆಂಟು ಬಿಚ್ಚಿಕೊಂಡು ಹೊರಡಬೇಕು. ಆದರೆ ಶಾಶ್ವತತೆ ಬಯಸುವವನು ಏನನ್ನೇ ಮಾಡಹೊರಟರೂ ಹತ್ತು ವರ್ಷದ ನಂತರ ಇದರ ಸ್ವರೂಪ, ಸ್ಥಿತಿಗತಿ ಹೇಗಿರಬಹುದು ಅಂತ ಮುಂಚಿತವಾಗಿ ಆಲೋಚಿಸುತ್ತಾನೆ. ಅದಕ್ಕೆ ಅನುಗುಣವಾಗಿ ಪ್ಲಾನ್ ಮಾಡುತ್ತಾನೆ. ಹತ್ತು ವರ್ಷಗಳ ನಂತರ ನಾವು ಮಾಡಿದ ಕೆಲಸ ಅಥವಾ ಸಾಧನೆಯ ವಿಸ್ತಾರ ಮತ್ತು ಎತ್ತರ ದೊಡ್ಡದಾಗದಿದ್ದರೆ ಏನನ್ನಾದರೂ ಯಾಕೆ ಮಾಡಬೇಕು?

ನೀನು ದುಡ್ಡಿನ ಆಸೆಗೆ ಸಿನಿಮಾಗಳಲ್ಲಿ ಮಾಡ್ತಿದೀಯಅಂತ ಗೆಳೆಯನೊಬ್ಬ ನನ್ನೊಂದಿಗೆ ಮೊನ್ನೆ ಜಗಳವಾಡುತ್ತಿದ್ದ. ಆ ಮಾತು ನಿಜ. ದುಡ್ಡು ಅಥವಾ ಆತ್ಮತೃಪ್ತಿ ಸಿಕ್ಕದ ಕೆಲಸಗಳನ್ನು ನಾನು ಮಾಡುವುದಿಲ್ಲ.

ಇವತ್ತು ಸಿನಿಮಾದಲ್ಲಿ ಪಾತ್ರ ಮಾಡಲು ಒಪ್ಪಿಕೊಂಡೆನೆಂದರೆ, ಅದು ಮೋಜಿಗೆ ಒಪ್ಪಿಕೊಂಡಂತಹುದಲ್ಲ. ಹತ್ತು ಹನ್ನೆರಡು ದಿನ ಒಬ್ಬ ನಿರ್ದೇಶಕನೊಂದಿಗೆ, ಒಂದು ಸಿನಿಮಾ ಯೂನಿಟ್ ನೊಂದಿಗೆ ಇರುವಂತಹ ಅವಕಾಶ ನನಗೆ ಯಾವತ್ತೂ ಸಿಗುವುದಿಲ್ಲ. ಪಾತ್ರ ಅಂತ ಮಾಡಿದರೆ ಸಿನಿಮಾ ಅರ್ಥವಾಗುತ್ತದೆ, ತಂತ್ರ ಅರ್ಥವಾಗುತ್ತದೆ. ಅನುಭವವಾಗುತ್ತದೆ. ನಾಳೆ ಯಾವತ್ತಾದರೂ ಸಿನಿಮಾ ಮಾಡಬೇಕು ಅನ್ನಿಸಿದರೆ:who knows? ಇದೆಲ್ಲ ಸಹಾಯಕ್ಕೆ ಬರುತ್ತದಲ್ಲವೆ?

ಇನ್ನೇನು ಮಗನಿಗೆ ನೌಕರಿಯಾಯಿತು, ಮಗಳ ಮದುವೆಯಾಯಿತು. ನನ್ನ ಜವಾಬ್ದಾರಿಗಳೆಲ್ಲ ಮುಗಿದವುಅಂತ ಮಾತಾಡುವ retired hurt ಧಾಟಿಯ ಹಿರಿಯರನ್ನು ನೋಡಿದ್ದೇನೆ. ನಮ್ಮ ಬೆಳಗೆರೆಯ ಶಾಲೆಗೊಂದು ಹೊಸ ಕೋರ್ಸು ಬೇಕಯ್ಯಾಅಂತ ಫೈಲು ಹಿಡಿದುಕೊಂಡು ಬೆಂಗಳೂರಿನ ಕೆಂಪು ಬಸ್ಸು ಹತ್ತಿಕೊಂಡು ಬರುವ ತೊಂಬತ್ತೊಂದು ವರ್ಷ ವಯಸ್ಸಿನ ಬೆಳಗೆರೆ ಕೃಷ್ಣ ಶಾಸ್ತ್ರಿಗಳನ್ನೂ ನೋಡಿದ್ದೇನೆ. What nextಎಂಬ ಪ್ರಶ್ನೆಯೊಂದೇ ಅಂಥವರನ್ನು ಈ ಪರಿ ಸಕ್ರಿಯವಾಗಿ, ಜೀವಂತವಾಗಿ ಇಟ್ಟಿದೆ.

ಲೈಫಲ್ಲೇನಿದೆ ಸಾರ್?ಅಂತ ಕೊರಗುವ ಅಳುಮುಂಜಿ ಯುವಕರನ್ನು ಈ ಬದುಕು ಹೆಜ್ಜೆಗೊಂದು ಡಿಫೀಟು ಮಾಡುತ್ತದೆ. ಈಗಷ್ಟೇ ನೀವೊಂದು ಕೆಲಸ ಮುಗಿಸಿದ್ದೀರಾದರೆ, ಡಿಗ್ರಿ ಪಡೆದಿದ್ದೀರಾದರೆ, ಅಂದುಕೊಂಡದ್ದನ್ನು ಸಾಧಿಸಿದ್ದೀರಾದರೆ ತಕ್ಷಣ ಈ ಪ್ರಶ್ನೆ ಕೇಳಿಕೊಳ್ಳಿ : What next?

Courtesy:http://thatskannada.oneindia.in

Monday, January 26, 2009

A Fantastic temple trip to Sringeri ,Horanadu,Dharmsthala and Kukke Subramanya in JUST 48 hours

Hai all
          I am just sharing my temple trip experience with you all so that it may be helpful for you in future!.Please forgive me if you find any spelling mistakes .

Since it was a long weekend(24,25 and 26 of JAN) me and my friend Darshan LC tried to book on 22rd  of JAN night to Sringeri.We had planned to book earlier ,but because of our other friends decisions to come or not for the trip,we have to wait till 22nd.So finally AGAIN me and Darshan were prepared for the trip.As we were late for booking to Sringeri,we didn't get theRajahamsa bus instead we got the LAST 2 seats(51 and 52) of Karnataka Sarige bus LUCKILY! at 9.15pm on Friday night(23rd JAN 2009).So on friday me and darshan planned to meet in majestic at 8.30 and we did so.Then we went for dinner in Kamat hotel near majestic.


CLICK ON THE IMAGES TO ENLARGE.
THE IMAGES ARE TAKEN FROM SONY ERICCSON K810i MOBILE




Then we went to majestic at 9 to see if our bus has come to the platform 5 mentioned in the ticket.But there was was no space for the bus to come for the platform itself  because of plenty of outgoing buses from majestic.So we went in search of the bus going to Sringeri.Finally we saw our bus at 10! in the majestic.






As we had got the last two seats I was worried how to sit in the last seat in a long journey without stretching out my legs.But to our surprise the seat in front of us removed!.We were so happy for that.

Have a look at that seat.


So the bus finally left majestic at 10.30pm with difficulty.There was traffic situation near tonelamangala junction because one vehicle was under repair.Half an hour wasted along that road.Then the journey was very smooth in NH-48 along KUNIGAL,Hassan road till Mudigere road.Sine we were seated in the last seat the roads of Mudigere to Chikamagalur waked us up at 3.30.Reached Chikamagalur at 4.30(As per the driver information usually he used to reach Chikmagalur by 3,because of traffic and the bus pick up it was late today)Darshan got up and asked where we are?As soon as I said Heremagalur ,he was very excited and got up and started introducing  the roads and places  in Chikmagalur(He did his BE here).For me it was the first time in Chikmagalur.It was very nice to see the place.




From Chikmagalur the bus faced towards Sringeri where we have had lot of ups and downs along the road providing us the experience which would help in our next 2 days journey.We came across a place called Jayapura before 22 kms from Sringeri which is the junction point if we come from the other route Koppa to Sringeri.So the bus reached Sringeri at 7.30 in the Saturday morning.(Total 9 hours journey)(350 kms from Banglore)

The bus stopped in front of the temple .We  enquired for the temple rooms ,but we got the answer as NO as expected.So we searched for the private lodge.We got Pallavi lodge for few hours with providing hot water for the bath charging us Rs 200.


This is how the room looks like



We got fresh ed up and went ot temple for Sri Sharadamba's darshan.We got special seva pooja and went inside.We were inside the temple for half and hour with the peaceful mind.We also saw  some parents  teaching  their children to write the alphabets in slate inside the temple.

We took lot of snapshots once we came outside the main temple.Take a look of few of these photos.












When we came out of the temple,it was 9.15.We quickly had breakfast outside the temple and left the room for Horanadu.We were informed that lot of buses go from Sringeri to Horanadu.We stood near the temple for the bus.The private bus came exactly at 10 which goes for Horanadu.The cost of each person is Rs 50 . The conductor said that the bus would reach Horanadu by 1.15 in the afternoon and the driver did reach on time .It was a very nice ride enjoying the beauty of NATURE. Here are some of the snapshots on the way to Horanadu.











See the  place called Basrikatte




Towards Kalasa




From Kalasa to Horanadu







Finally we were in  Horanadu at 1.15.We made  the room near the temple for Rs 80 .Kept our luggage,freshed up and went to the temple.We took the ticket for special seva and we were made to sit very close to the God Sri Annapoorneshwari for ten minutes.Then we went for lunch which was very good.





By 2.30 we came out of the temple and asked for the bus to Dharmsthala.We got the information that there is no direct bus to Dharmsthala.We have to go to Kottigehara and then get the bus to Dharmsthala.We missed the goverment bus at 2.15 but we got another private bus to Kottigehaara.


Started at 3 from Horanadu we reached Kottigehaara at 5 in the evening.The roads wre very short and more steep curves.But the nature scenes are really wonderful to watch






At Kottge haara

From Kottigehaara there are plenty of buses coming from Shimoga.We got one Shimoga bus at 3 and went towards Dharmsthala.Few kilometers on the way the KSRTC bus has hit the side of Innova vehicle in the crossing due to which we got delayed there by 15 mins. 




Here along the way I saw one of the nature's hidden beauty ,the CHARMUDI ghat.Here are some of the pics








We reached Dharmsthala at 7.15 and luckily we got the room.Since the temple darshan timings was till 8.30,we decided go for it and we did so.There were less number of people and we got the nice view of the Lord Manjunatha Swamy and came out around ten finishing the lunch at ten .Since our mobile charge was down,we saw the charging point ,but there was ONLY ONE charging point for the whole building.So we waited for the charging in the night.


Finally we rested for the day.

We got up early in the morning and decided to see the temple once again as there were few people in the morning.We had tiffin outside after God's darshan and left for KukkeSubramanya around 10.30.







On the way to Kukke Subramanya





We reached KukkeSubramanya at 12.30 and there was a large number of people inside the temple.Darshan LC blamed me that we would have  come earlier from Dharmsthala,but once the queue was moving fast he calmed down and was happy at last.



The queue for the lunch.We finshed the lunch around 3.

Then we moved to bus stand to find out any bus to Bangalore.Again for our LUCK there was an extra bus to Bangalore at 3.30.Darshan LC got down in Sakaleshpur and went to his home through Chikmagalur and me to KUNIGAL.

Co-incidentally we both reached our homes at ten in night.

We never thought that our planned gets executed in this manner.

We both were very LUCKY all the way to go along this temple trip and get the blessings of all the GODS