Monday, January 12, 2009

ಅದೃಷ್ಟ ಕೆಲವರಿಗೆ ಮಾತ್ರ, ಏಕೆ?

ಯಾಕೆ ಅದೃಷ್ಟ ಕೆಲವರಿಗೆ ಮಾತ್ರ ಒಲಿಯುತ್ತದೆ? ಮತ್ತು ಇದರ ಬೆನ್ನು ಬಿದ್ದ ಕೆಲವರಿಗೆ ಅದೃಷ್ಟ ಜೀವನದುದ್ದಕ್ಕೂ ಮರೀಚಿಕೆಯಾಗಿ ಕಾಣಿಸುತ್ತದೆ. ಅವರಿಗೆ ಅದು ಎಂದೂ ಸಿಗದೆ!? , ಈ ಪ್ರಶ್ನೆಗೆ ಇಲ್ಲಿ ಒಬ್ಬ ಮನಃಶಾಸ್ತ್ರಜ್ಞ ಉತ್ತರ ಹುಡುಕುವ ಪ್ರಯತ್ನ ಮಾಡಿದ್ದಾನೆ. ಇದನ್ನು ಅವನ ಮಾತುಗಳಲ್ಲೇ ಕೇಳಿ.

 ಹತ್ತು ವರ್ಷದ ಕೆಳಗೆ ನಾನು ಅದೃಷ್ಟವನ್ನು, ಅದು ಒಲಿಯುವ ಬಗೆಯನ್ನು ಪರೀಕ್ಷಿಸಲು ಯೋಚಿಸಿದೆ, ನನಗೆ ಯಾಕೆ ಕೆಲವು ಜನರಿಗೆ ಇದು ಯಾವಗಲೂ ಬಯಸದೆ ಬರುವ ಭಾಗ್ಯ, ಮತ್ತು ಕೆಲವರಿಗೆ ಜೀವನದುದ್ದಕ್ಕು ದಕ್ಕದೆ ಇರುವ ವಸ್ತು ಎಂಬ ಪ್ರಶ್ನೆ ಕಾಡುತ್ತಿತ್ತು. ನನ್ನ ಪ್ರಯೋಗದ ಪ್ರಥಮ ಮೆಟ್ಟಿಲಾಗಿ ನಾನು ನ್ಯಾಶನಲ್ ನ್ಯೂಸ್ ಪೇಪರ್ ನಲ್ಲಿ ತಾವು ಅದೃಷ್ಟವಂತರು ಮತ್ತು ದುರದೃಷ್ಟವಂತರು ಎಂಬ ಭಾವನೆ ಹೊಂದಿದವರು ನನ್ನನ್ನು ಸಂಪರ್ಕಿಸಿ ಎನ್ನುವ ಕೋರಿಕೆಯೊಂದಿಗೆ ಜಾಹೀರಾತನ್ನು ಬಿತ್ತರಿಸಿದೆ.

 ಇದರ ಫಲವಾಗಿ ನೂರಾರು ವಿಭಿನ್ನ ವ್ಯಕ್ತಿತ್ವದ ಪುರುಷರು ಮತ್ತು ಮಹಿಳೆಯರು ಸ್ವಯಂ ಪ್ರೇರಿತರಾಗಿ ನನ್ನ ತನಿಖೆ/ಪ್ರಯೋಗದಲ್ಲಿ ಪಾಲ್ಗೊಳ್ಳಲು ತಾವಾಗೇ ಮುಂದೆ ಬಂದರು. ನಾನು ಅವರನ್ನು ಕೂಲಂಕುಶವಾಗಿ ಸಂದರ್ಶಿಸಿ, ಅವರ ಬದುಕನ್ನು ಅವಲೋಕಿಸಿ ನನ್ನ ಪ್ರಯೋಗದಲ್ಲಿ ಪಾಲ್ಗೊಳ್ಳಲು ವಿನಂತಿಸಿದೆ.

 ಈ ಎಲ್ಲ ಅದೃಷ್ಟವಂತರು ಮತ್ತು ದುರದೃಷ್ಟವಂತರಿಗೆ ತಮಗೆ ಒದಗಿದ ಕ್ಷಣಗಳಬಗ್ಗೆ ಯಾವದೇ ರೀತಿಯ ಪೂರ್ವಸುಳಿವು ಮತ್ತು ಕಾರಣದ ಬಗ್ಗೆ ತಿಳಿದಿರಲಿಲ್ಲ. ಬಹುತೇಕ ಇವರ ಜೀವನ ನಡವಳಿಕೆಗಳು ಇದಕ್ಕೆ ಕಾರಣವೆಂಬತ್ತಿದ್ದವು. ಸ್ವಲ್ಪ ಜನರಿಗೆ ಈ ಅದೃಷ್ಟವೆಂಬುದು ತಾನಾಗಿ ಯಾವಾಗಲೋ ಬರುವ ಸಂದರ್ಭವಾದರೆ, ಕೆಲವರಿಗೆ ಇದು ಪದೇ ಪದೇ ಒದಗಿಬರುವ ಸನ್ನಿವೇಶ/ಸಂಗತಿ ಮತ್ತು ಉಳಿದವ ಕೆಲವರಿಗೆ ಎಂದೂ ಹತ್ತಿರ ಸುಳಿಯದ ವಿಷಯವಾಗಿ ತೋರಿಬಂತು. 

ಹಾಗದರೆ ಹತ್ತಿರ ಸುಳಿಯುವ ಅವಕಾಶವನ್ನು ಈ ದುರದೃಷ್ಟವಂತರು ಗುರುತಿಸುವದಿಲ್ಲವೇ? ಎಂಬ ಭಾವನೆ ನನ್ನಲ್ಲಿ ಗಾಢವಾಗತೊಡಗಿತು,ಈ ಅವಕಾಶಗಳ ಗುರುತಿಸುವಿಕೆಲ್ಲಿನ ವ್ಯತ್ಯಾಸಗಳನ್ನು ಈ ಎಲ್ಲರಲ್ಲಿ ಕಂಡುಕೊಳ್ಳಲು ಒಂದು ಚಿಕ್ಕ ಪ್ರಯೊಗವನ್ನು ಕೈಗೊಂಡೆ. ಪ್ರಯೋಗದಂಗವಾಗಿ ಎರಡೂ ತರಹದ ಜನರಿಗೆ ಒಂದು ನ್ಯೂಸ್ ಪೇಪರನ್ನು ಕೊಟ್ಟು ಇದರಲ್ಲಿರುವ ಒಟ್ಟೂ ಚಿತ್ರಗಳನ್ನು ಎಣಿಸಲು ಹೇಳಿದೆ. ಇದಕ್ಕೂ ಮೊದಲು ಎಲ್ಲಾ ನ್ಯೂಸ್ ಪೇಪರ್ಗಳಲ್ಲಿಯೂ,"ನಿಮಗೆ ಈ ಸಾಲುಗಳು ಗೊಚರಿಸಿದರೆ, ನನಗೆ ತಿಳಿಸಿ ಮತ್ತು ೨೫೦ ಡಾಲರ್ ಗೆಲ್ಲಿ" ಎನ್ನುವ ಅರ್ಧ ಪುಟವನ್ನು ವ್ಯಾಪಿಸುವಂತಹ ಒಂದು ಸಂದೇಶವನ್ನು ದೊಡ್ಡ ಅಕ್ಷರಗಳಲ್ಲಿ, ದಪ್ಪದಾಗಿ ಪ್ರಿಂಟ್ ಮಾಡಲಾಗಿತ್ತು.

ಆದರೆ ಹೀಗೆ ಕಣ್ಣಿಗೆ ರಾಚುವಂತಿದ್ದ ಸಂದೇಶವನ್ನು ಕೇವಲ ಅದೃಷ್ಟವಂತರು ಗುರುತಿಸಿದ್ದರು. ನತದೃಷ್ಟವಂತರೆಂದು ತಮ್ಮನ್ನು ತಾವೆ ಕರೆದುಕೊಳ್ಳುತ್ತಿದ್ದವರು ಇದನ್ನು ಗಮನಿಸಲು,ಗುರುತಿಸಲು, ವಿಫಲವಾಗಿದ್ದರು.

 ಈ ವಿಫಲಗುಂಪಿನವರು ಉಳಿದವರಿಗಿಂತ ಸದಾ ಚಿಂತೆಯಲ್ಲಿ ಇರುತ್ತಿದ್ದರು ಮತ್ತು ಅವರ ಈ ನಡವಳಿಕೆ ಅವರಿಗೆ ಸುಳಿವಿಲ್ಲದೇ ಎದುರಾಗುವ ಅವಕಾಶಗಳನ್ನು ಗುರುತಿಸಲು ಸಾದ್ಯವಾಗದಂತೆ ಮಾಡಿತ್ತು.

ಇದರ ಮೊದಲ ಪರಿಣಾಮವಾಗಿ ಅವರಿಗೆ ಅವಕಾಶಗಳು ದೊರಕಿರುವದಿಲ್ಲ, ಅವರಿಗೆ ಬೇಕಿದ್ದನ್ನು ಪಡೆಯುವ/ಹುಡುಕುವ ತೀವ್ರತೆಯಲ್ಲಿ, ನಿತ್ಯ ಜೀವನದಲ್ಲಿ ಎದುರಾಗುವ ಉತ್ತಮ ಅವಕಾಶಗಳನ್ನು ಗುರುತಿಸಲು ಅವರು ಸದಾ ವಿಫಲರಾಗುತ್ತಿದ್ದರು. ಇಂತಹವರು ಬದುಕಿನಲ್ಲಿ ಸರಿಹೊಂದುವ ಸ್ನೇಹಿತರ ಹುಡೂಕಾಟದಲ್ಲಿ, ತಮಗೆ ಬೇಕಾದಂತಹುದೇ ಕೆಲಸದ ಜಾಹೀರತನ್ನು ನ್ಯೂಸ್ ಪೆಪರ್ ನಲ್ಲಿ ಕಾಣುವ ತವಕದಲ್ಲಿ, ಅಲ್ಲಿರುವ ಇನ್ನೊ ಇತರ ಉತ್ತಮ ಕೆಲಸದ ಜಾಹೀರಾತನ್ನು ಗಮನಿಸದೇ ತಾಳ್ಮೆಗೇಡುತ್ತಾರೆ, ನಿರ್ಭಾಗ್ಯರಾಗುತ್ತಾರೆ.

 ಆದರೆ ಅದೃಷ್ಟವಂತರು ತಾಳ್ಮೆಹೊಂದಿದ್ದು, ಅವರು ಬಯಸಿದ್ದು ಬಿಟ್ಟು.. ಬೇರೆ ಇನ್ನೇನಿದೆ ಎಂಬುದನ್ನು ಗಮನಿಸಲು ಶಕ್ತರಾಗಿರುತ್ತಾರೆ.

 ನನ್ನ ಪ್ರಯೋಗದ ಫಲವಾಗಿ ಅದೃಷ್ಟವಂತರ, ಮುಖ್ಯ ನಾಲ್ಕು ಸ್ವಭಾವಗಳು, ಅವರಿಗೆ ಉತ್ತಮ ಅವಕಾಶಗಳನ್ನು ಗುರುತಿಸಲು ನೆರವಾಗುತ್ತವೆ ಎಂದು ದೃಢಪಡಿಸಿತು. ಅವರು ಅವಕಾಶಗಳನ್ನು ಗುರುತಿಸುವದರಲ್ಲಿ ನಿಷ್ಣಾತರು, ಅವಕಾಶಗಳು,ಜೀವನದ ಬಗ್ಗೆ ಧನಾತ್ಮಕವಾಗಿ ಯೋಚಿಸುವವರು, ಮನುಷ್ಯ ಸಹಜ ನಿರ್ಧಾರಗಳಿಗೆ ಬೆಲೆಕೊಡುವವರು ಮತ್ತು ಸೋಲಿನಿಂದ ಬೇಗ ಚೇತರಿಸಿಕೊಳ್ಳುವ ವ್ಯಕ್ತಿತ್ವದವರಾಗಿರುತ್ತಾರೆ. ಇದು ಅವರನ್ನು ಅದೃಷ್ಟವಂತರನ್ನಾಗಿ ಮಾಡೂತ್ತದೆ.

 ಪ್ರಯೊಗದ ಕೊನೆಯ ಹಂತವಾಗಿ, ಯಾಕೆ ಈ ನಾಲ್ಕು ಗುಣಗಳನ್ನು ಅಳವಡಿಸಿಕೊಂಡು ಏಲ್ಲರೂ ಅದೃಷ್ಟವಂತರಾಗಬಾರದು ಏನಿಸತೊಡಗಿತು. ನಾನು ಆ ನತದೃಷ್ಟವಂತರಲ್ಲಿ ಕೆಲವು ತಿಂಗಳುಗಳಕಾಲ ಈ ನಾಲ್ಕು ಗುಣಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಿದೆ ಮತ್ತು ಆ ದಿಶೆಯಲ್ಲಿ ಪ್ರಾಯೋಗಿಕವಾಗಿ ಪಾಲ್ಗೊಂಡು ಅವರನ್ನು ಅದೃಷ್ಟವಂತರನ್ನಾಗಿ ಮಾಡಹೊರಟೆ.

ಕೆಲ ದಿನಗಳ ತರುವಾಯ,ಈ ನನ್ನ ಪ್ರಯೋಗಗಳು/ಸಲಹೆಗಳು ಅವರಲ್ಲಿ ಅವಕಾಶಗಳನ್ನು ಗುರುತಿಸುವ ಮನೋಭಾವವನ್ನು ಬೆಳೆಸಿತ್ತು. ಅವರು ತಾವು ಅದೃಷ್ಟವಂತರೆಂದು ಭಾವಿಸಿದರು, ಸೋಲುಗಳನ್ನು ತಾತ್ಕಾಲಿಕವೆಂದುಕೊಂಡರು. ಹೀಗೆ ಒಂದು ತಿಂಗಳ ನಂತರ ಆ ಗುಂಪಿನವರೆಲ್ಲರೂ ತಮಗಾದ ಅನುಭವವನ್ನು ನನ್ನಲ್ಲಿ ಹಂಚಿಕೊಂಡರು. ಇದರಲ್ಲಿ ೮೦ ಪ್ರತಿಶತಃ ಜನರು ತೃಪ್ತಿಹೊಂದಿದ್ದು ತುಂಬಾ ಸಂತೋಷವನ್ನು ಪಡೆದಿದ್ದರು ಮುಖ್ಯವೆಂದರೆ ಅವರೆಲ್ಲ ಅದೃಷ್ಟಶಾಲಿಗಳಾಗಿ ಬದಲಾವಣೆಹೊಂದಿದ್ದರು !!

ಇದರಲ್ಲಿ ಪಾಲ್ಗೊಂಡ ಅದೃಷ್ಟವಂತರು ಇನ್ನೂ ಅದೃಷ್ಟವಂತರಾದರು, ಕೊನೆಯದಾಗಿ ನನಗೆ ನನ್ನ ಅದೃಷ್ಟ - ನತದೃಷ್ಟ ಪ್ರಶ್ನೆಗೆ ಉತ್ತರ ಸಿಕ್ಕಿತ್ತು.

ಹೀಗೆ ನಾಲ್ಕು ಗುಣಗಳ ಅಳವಡಿಕೆ ಯಾರನ್ನಾದರೂ ಅದೃಷ್ಟವಂತರನ್ನಾಗಿ ಮಾಡುತ್ತದೆ ಏಂದು, ಪ್ರೊ ||ರಿಚರ್ಡ ವೈಸಮನ್ ಪಟ್ಟಿಮಾಡುತ್ತಾರೆ.

ಅವು:

೧) ನಿಮ್ಮಲ್ಲಿ ಸ್ವಾಭಾವಿಕವಾಗಿ ಮನತಟ್ಟುವ ನಿರ್ಧಾರಗಳಿಗೆ ಒತ್ತು ಕೊಡಿ - ಅವು ಬಹುತೇಕ ಸಮಯ ಸರಿಯಾಗಿರುತ್ತದೆ.

೨) ಹೊಸ ಅನುಭವಗಳನ್ನು ಪಡೆಯಲು ಉತ್ಸುಕರಾಗಿರಿ. ನಿಮ್ಮ ಪೂರ್ವನಿರ್ಧಾರಿತ ಬದುಕಿನ ಶೈಲಿಗೆ ಬದ್ದರಾಗದಿರಿ.

೩) ದಿನದಲ್ಲಿ ಕೆಲಸಮಯ ಆದಿನದ ಯಾವ ಯಾವ ಕೆಲಸ ಕಾರ್ಯಗಳು ಸರಿಯಾಗಿ ನಡೆದಿದೆ ಎಂದು ಯೊಚಿಸಿ.

೪) ನಿಮ್ಮನ್ನು ನೀವು ಅದೃಷ್ಟವಂತರೆಂದು ಭಾವಿಸಿ. ಮುಖ್ಯವಾದ ಕೆಲಸ ಪ್ರಾರಂಬಿಸುವ ಮೊದಲು ಜಯ ನಿಮ್ಮದೇ ಎಂಬ ಧನಾತ್ಮಕ ಯೋಚನೆ ಇರಲಿ.


    ಮೇಲಿನ ಲೇಖನ ನನಗೆ ಮೇಲ್ ನಲ್ಲಿ ಸಿಕ್ಕ "Why some people have all the luck , By Richard Wiseman, University of Hertfordshire. 

No comments: