Tuesday, April 22, 2008

ತಾಕತ್ತು! ಈ ಹಾಡು ಸಕ್ಕತ್ತು!

ಇಂಡಿಯನ್ ಪ್ರೀಮಿಯರ್ ಲೀಗಿನಲ್ಲಿ ಸೆಣುಸ್ತಾ ಇರೋ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡದ ಆಟಗಾರರನ್ನು ಉತ್ತೇಜಿಸಕ್ಕೇ ಅಂತ ಸಕ್ಕತ್ತಾಗಿರೋ ಒಂದು ಹಾಡನ್ನು ಅಭಿಮಾನಿಗಳು ಮಾಡಿದಾರೆ! ಈ ಹಾಡು ಎಲ್ರು ಮನ್ಸನ್ ಗೆದ್ದು ಸಖತ್ ಮಿಂಚ್ತಿದೆ .
ಮೊದಲಿಗೆ, ಈ ತಂಡದೋರ ಬಟ್ಟೆ ಬಣ್ಣಾನೂ ಹಳದಿ, ಕೆಂಪು ಆಗಿರೋದುನ್ನ ನೋಡ್ತಿದ್ರೆ ಖುಷಿಯಾಗುತ್ತೆ. ಬೇರೆ ಬೇರೆ ದೇಶದ ಆಟಗಾರರನ್ನು ಈ ತಂಡ ಒಳಗೊಂಡಿದೆ, ಈ ಲೀಗಿನ ಪಂದ್ಯಗಳು ಭಾರತದ ಎಲ್ಲಾ ಮೂಲೆ ಮೂಲೆಲಿರೋ ಜನರೂ ನೋಡ್ತಾರೆ. ಅದರ ಜೊತೆಗೆ ಈ ಹಾಡನ್ನ ಕೂಡಾ!
ಕನ್ನಡದಲ್ಲಿರೋದು ಹೆಮ್ಮೆ, ಕೀಳರಿಮೆ ಅಲ್ಲ!
ಈ ತಂಡಕ್ಕಾಗಿ ಕಟ್ಟಿರೋ ಹಾಡು ಕನ್ನಡದಲ್ಲಿರೋದು, ಹಾಗಿಟ್ಟುಕೊಳ್ಳೋದನ್ನೇ ತಮ್ಮ ವಿಶೇಷತೆಯಾಗಿ ಮೆರುಸ್ತಾ ಇರೋದು ನಿಜವಾಗ್ಲೂ ನಾವು ಕನ್ನಡಕ್ಕೆ ಎಲ್ಲ ಕ್ಷೇತ್ರಗಳಲ್ಲಿ ಇರೋ ಬಳಕೆಯ ಸಾಧ್ಯತೇನಾ ಕಣ್ ಬಿಟ್ ನೋಡ್ತಿರೋ ಸೂಚನೆ !
ಇಂಟರ್ ನ್ಯಾಷನಲ್ ಆಟ, ಇಂಟರ್ ನ್ಯಾಷನಲ್ ಆಟಗಾರ್ರು ಅಂತ ಇಲ್ಲಿ ಕನ್ನಡಾನ ಕಡೆಗಣಿಸ್ದೆ ಇರೋದು ನಮಗೆಲ್ಲ ಪಾಠವಾಗಬೇಕಿದೆ. ನಿಜಾ ಹೇಳ್ಬೇಕು ಅಂದ್ರೆ ಈ ಹಾಡಿಗೆ, ಈ ತಂಡಕ್ಕೆ ಒಂದು ಖಳೆ ಬಂದಿರೋದೆ ಆ ಹಾಡಲ್ಲಿ ಸ್ಥಳೀಯ ಸೊಗಡನ್ನ ತನ್ನದಾಗಿಸಿಕೊಂಡಿದ್ದಕ್ಕೇ.
ಇದು ಕ್ಲಬ್ ಕ್ರಿಕೆಟ್ ಆಗಿದ್ರೂ ಕೂಡಾ, ಆಟ ನೋಡಕ್ ಬರೋರೆಲ್ಲಾ ಕೈಯ್ಯಲ್ಲಿ ಹಳದಿ ಕೆಂಪು ಬಾವುಟ ಹಿಡ್ಕೊಂಡ್ ಬನ್ನಿ ಅಂತಿರೋದನ್ನು ನೀವು ಗಮನಿಸಿ ನೋಡುದ್ರೆ, ಇದಕ್ಕಿರೋ ಮಹತ್ವಾ ರಾಷ್ಟ್ರೀಯ ಕ್ರಿಕೆಟ್ಟಿಗಿಂತ ಜಾಸ್ತಿ ! ಸುಮ್ಮನೆ ಊಹಿಸಿಕೊಳ್ಳಿ, ಚಿನ್ನಸ್ವಾಮಿ ಕ್ರೀಡಾಂಗಣದ ತುಂಬಾ.... ಹಳದಿ ಕೆಂಪಿನ ಬಾವುಟಗಳು ರಾರಾಜಿಸ್ತಾ ಇದ್ರೆ, ಅದುನ್ನ ದೂರದರ್ಶನದಲ್ಲಿ ನೋಡ್ತಾ ಇದ್ರೆ ನಾಡಿನ ಮೂಲೆ ಮೂಲೇಲಿರೋ ಕನ್ನಡದೋರ ಮನಸ್ಸುಗಳು ಹೇಗೆ ಹಿಗ್ಗುತ್ವೆ, ಹೇಗೆ ಒಗ್ಗೂಡುತ್ವೆ ಅಂತಾ!

1 comment:

Haage Summane said...

good... u have it all in kannada!!!!!